ಲೋಕದ ಜನರ ಮಾರ್ಗದರ್ಷನಕ್ಕಾಗಿ ವಿವಿಧ ಕಾಲಗಳಲ್ಲಿ ವಿವಿಧ ದಿವ್ಯ ಗ್ರಂಥಗಳನ್ನು ಕಳಿಸಲಾಗಿತ್ತು ಎಂದು ಕುರ್‍ಆನ್ ಸಾರುತ್ತದೆ. ಪ್ರವಾದಿಗಳಾದ ಡೇವಿಡ್, ಮೋಸೆಸ್, ಜೀಸಸ್ ಮುಂತಾದವರು ಅಂತಹ ದಿವ್ಯ ಗ್ರಂಥಗಳನ್ನು ತಮ್ಮ ತಮ್ಮ ಕಾಲದ ಜನರಿಗೆ ನೀಡಿದ್ದರು. ಅಂತಹ ದಿವ್ಯ ಗ್ರಂಥಗಳ ಶ್ರೇಣಿಗೆ ಸೇರಿದ ಅಂತಿಮ ಗ್ರಂಥವೇ ಪವಿತ್ರ ಕುರ್‍ಆನ್. ಅದು ಪ್ರವಾದಿಗಳಲ್ಲಿ ಅತ್ಯಂತ ಕೊನೆಯವರಾದ ಮುಹಮ್ಮದ್ (ಸ) ರವರಿಗೆ ಹಂತಹಂತವಾಗಿ ಅಲ್ಲಾಹ್ ನು ಕಳಿಸಿಕೊಟ್ಟ ದಿವ್ಯ ಸಂದೇಶದ ಸಂಕಲನವಾಗಿದ್ದು, ಇಂದಿಗೂ ಅದರ […]