ರಮಝಾನ್ ತಿಂಗಳು ಕುರ್ ಆನ್ ಅವತೀರ್ಣವಾದ ತಿಂಗಳೆಂಬುದೇ ಅದರ ವೈಶಿಷ್ಟ್ಯತೆಯಾಗಿದೆ. ಮಾನವರಿಗೆ ಮಾರ್ದರ್ಶನ ನೀಡುವುದೇ ಕುರ್ ಆನ್ ಉದ್ದೇಶ. ಪವಿತ್ರ ಕುರ್ ಆನ್ ನ ಅವತೀರ್ಣವು ಭೂಮಿಯ ಮೇಲೆ ನಡೆದ ಅತ್ಯಂತ ಮಹತ್ವ ಪೂರ್ಣ ಘಟನೆಯಾಗಿದೆ. ಅದಕ್ಕಿಂತ ಉತ್ತಮ ಘಟನೆ ಕುರ್ ಆನ್ ಅವತೀರ್ಣಕ್ಕಿಂತ ಮುಂಚೆ ಸಂಭವಿಸಿರಲಿಲ್ಲ ಹಾಗೂ ಇನ್ನು ಸಂಭವಿಸಲಿಕ್ಕೂ ಇಲ್ಲ. ಅಲ್ಲಾಹನು ಮಾನವನಿಗೆ ನೀಡಿದ ಅನುಗ್ರಹಗಳಲ್ಲಿ ಪವಿತ್ರ ಕುರ್ ಆನ್ ಗಿಂತ ಉತ್ತಮವಾದುದು ಬೇರೊಂದಿಲ್ಲ. ಇಹಜೀವನದಲ್ಲಿ ಶಾಂತಿನೆಮ್ಮದಿಯಿಂದ […]